Bhasaka
← Back to home

ಹರಿಯೆ ದುರಿತ ಗಜಕೇಸರಿಯೆ ತ್ರಿಲೋಕದ

Author: ವಿಜಯದಾಸCategory: ಶ್ರೀಕೃಷ್ಣ
ಹರಿಯೆ ದುರಿತ ಗಜಕೇಸರಿಯೆ ತ್ರಿಲೋಕದ ದೊರೆಯೆ ನಿನಗಾರು ಸರಿಯೆ ಭಾಗ್ಯದ ಸಿರಿಯೆ | ಕರುಣವ ಮಾಡಿ ಪರಿಯಲಿ ಸಾರಂಗ | ಧರನೆ ಧರಣಿಧರ ವರ ಪರಿಯಂತಾ ಭೂಮಿಯೊಳಗೆ ಉತ್ತಮ ನೆಲಾ ನೀಡೆಂದು | ಹೇಮ ಮುನೀಶ್ವರ ಕಾಮಿಸಿ ಹರಿಪಾದ | ತಾಮರಸ ಹೃದಯಧಾಮದೊಳಗೆ ನೀ ನೇಮ ನಿತ್ಯದಲ್ಲಿ | ತಾ ಮನೋರಥನಾಗಿ || ಸಾಮಜವರದನ ನಾಮವ ನೆನೆಯಲು | ಸೋಮ ಸಹೋದರೆ ಹೇಮ ತೀರಥದೊಳು | ತಾ ಮನಗೊಂಬ ನಾಮನೆ ಪಡೆದು ||1|| ಮಂಗಳಾಂಗಿಯೇ ಬರಲು ರಂಗರಾಯನು ಸಾ | ರಂಗಶರವೇಪಿಡಿದುಶೃಂಗಾರಮಯದಿಂದ | ಬಂಗಾರ ರಥ ತು | ರಂಗಗಳ ಸಮೇತ ಭುಜಂಗಶಯನನಾಗಿ ಕಂಗೊಳಿಸುತ್ತಲೂ | ತಿಂಗಳ ನಂದಾದಿ ಕಂಗಳಿಗೊಪ್ಪಲು | ತುಂಗ ಮಹಿಮ ವಿಹಂಗಾದಿಗಳಿಂದ ಹಿಂಗದಲೆ ಸೊಗಸಂಗಳ ಕೈಕೊಳ್ಳುತ್ತಿಂಗಿತದಲಿ ನೀಲಾಂಗ ನಿರ್ದೋಷಾ ||2|| ಜಯ ಕುಂಭಘೋಣನಿಲಯಾನೆನೆಸುವ ಉ | ಭಯ ಕಾವೇರಿ ನಿವಾಸಾ | ಭಯ ಕೃದ್ಭಯನಾಶ | ದಯಾಪಯೋನಿಧಿ ಸಾದಯ ವಿಮಲ ನಯನ | ತ್ರಯ ಗುಣವಿರಹಿತಾ ವಿಯದ್ಗಂಗಾನದಿ ತಾತಾ | ಪಯೋನಿಧಿಸುತೆ ಧರುಣಿಯ ಎಡಬಲದಲ್ಲಿ ಜಯ ಜಯವೆನುತಿರೆ ಪ್ರಿಯನಾಗಿ ಕೇಳುತಾ | ನಯನ ಮೀತಾರ ಪಾಲಯಪಾವನದೇವಾ | ದಯಮುಖ ಹರಾ ವಿಜಯವಿಠ್ಠಲಪರಾ ||3||

Thoughts & Reflections

0

No reflections shared yet. Be the first to share your thoughts!

Share your thought