Bhasaka
← Back to home

ಹರಿಯೆ ಸ್ವತಂತ್ರ ಚತುರದಶ ಭುವನಕೆ

Author: ವಿಜಯದಾಸCategory: ಶ್ರೀಕೃಷ್ಣ
ಹರಿಯೆ ಸ್ವತಂತ್ರ ಚತುರದಶ ಭುವನಕೆ | ಪರಮೇಷ್ಠಿ ಶಿವಾದ್ಯರಾತಗೆ ದಾಸರೆನ್ನು ಹರಿಹರರ ಒಂದೇ ಸ್ಥಾನದಲಿ ಕಾಣುವೆನೆಂದು | ಪರಮ ಭಕುತಿಯಿಂದ ಕ್ರೋಧಮುನಿಪ || ಧರಣಿಯೆಲ್ಲ ತಿರುಗಿ ಶುಕ್ಲವತೀ ತೀರಕೆ ಬರಲು | ವಸಂತ ಕಾಲದಂತೆ ಪೊಳಿಯೇ||1|| ತಪಸಿ ತಪವನೆ ಮಾಡುತಿರಲು ಖರಾಟಖಳ | ಉಪಹತಿ ಕೊಡುತಿಪ್ಪ ವರಬಲದಿ || ವಿಪುಳದೊಳಗಿವಗೆಲ್ಲಿ ಎದುರಾರು ಇಲ್ಲದಿರೆ | ಸುಪರ್ಣಾದಿ ಮೊರೆ ಇಡಲು ಬೊಮ್ಮಗೆ||2|| ತಲೆದೂಗಿ ಪರಮೇಷ್ಠಿ ಹರಿಯ ಬಳಿಗೆ ಬಂದು | ಖಳನ ಕೋಲಾಹಲವ ಬಿನ್ನೈಸಲು || ಪುಲಿತೊಗಲಾಂಬರನ ಸಹಿತ ಸರ್ವೋತ್ತಮನ | ಒಲಿಮೆಯಿಂದ ಬಂದು ಸುಳಿದರಾಗಂದು ||3|| ದಾನವನ ಕೊಂದು ದೇವತೆಗಳ ಸುಖಬಡಿಸಿ | e್ಞÁನಕ್ರೋಢಮುನಿ ಮನಕೆ ಪೊಳೆದು || ಆನಂದದಿಂದಲಿ ನಿಂದು ಮೆರೆದ ಲೀಲೆ | ಏನೆಂಬೆನಯ್ಯ ಹರಿಹರ ವಿಚಿತ್ರಾ ||4|| ಶಿವನ ಸಾಲಿಗ್ರಾಮದೊಳಗೆ ಪ್ರವಿಷ್ಠ ಕೇ| ಶವನು ತಾನೆ ಕಾಣೊ ಸ್ವಾತಂತ್ರನು || ಇವರು ಶಂಕರನಾರಾಯಣನೆಂಬೊ ಪೆಸರಿನಲಿ | ಅವನಿಯೊಳು ಪ್ರಖ್ಯಾತರಾಗಿ ನಿಂದಿಹರೋ ||5|| ಹೀನ ಮಾನವರು ಇವರಿಗೆ ಐಕ್ಯ ಪೇಳುವರು ಕಾಣುತಲಿದೆ ಎರಡು ಮೂರುತಿಗಳು ನೋಳ್ಪರಿಗೆ | ಶ್ರೀ ನಾರಾಯಣಗೆ ಈಶ ಸಮನೇ ||6|| ಚಕ್ರ ಶಂಖ ಗದೆ ಪದುಮ ಹರಿಗೆ ನೋಡು | ಮುಕ್ಕಣ್ಣಗೆ ಡಮರುಗ ತ್ರಿಶೂಲವು || ಮುಖ್ಯ ದೇವತಿ ಹರಿ ಅವಾಂತರ ಶಿವನು | ಶಕ್ರಾದ್ಯರೊಲಿದು ಭೇದವನು ಪೇಳುವರು ||7|| ಸತ್ಯಂ ವದವೆಂಬ ಶ್ರುತಿವರದು ಪೇಳುತಿದೆ | ಭೃತ್ಯ ರುದ್ರನು ಕಾಣೊ ಲಕುಮಿವರಗೆ || ಸತ್ಯದಲಿ ಸಿದ್ಧವಯ್ಯ ಎಂದು ತಿಳಿದು | ಸ್ತೌತ್ಯ ಮಾಡಿದವಗೆ ವೈಕುಂಠ ಪದವಿ ||8|| ಕ್ರೋಢ ಪರ್ವತವಿದೆ ತೀರ್ಥ ಪಾವನಕರ | ನಾಡೊಳಗೆ ಕ್ಷೇತ್ರ ಉತ್ತಮ ಮಾನವಾ || ಪಾಡಿದರೆ ವಿಜಯವಿಠ್ಠಲರೇಯ ಒಲಿದು ಕೂಡಾಡುವನು ದೃಢ ಭಕುತಿಯಿತ್ತು ಅನುದಿನಾ ||9||

Thoughts & Reflections

0

No reflections shared yet. Be the first to share your thoughts!

Share your thought