Bhasaka
← Back to home

ಹರಿಹರ ಸಲಹಯ್ಯಾ ಪರಮ

Author: ವಿಜಯದಾಸCategory: ಶ್ರೀಕೃಷ್ಣ
ಹರಿಹರ ಸಲಹಯ್ಯಾ ಪರಮ ಕರುಣವ ಮಾಡಿ ಶರಣು ಹೋ | ಶರಣು ಹೋಗುವೆ ನಿಮ್ಮ ಚರಣ ಕಮಲಕೆ | ಎರವು ಮಾಡಿದೆ ನಿರುತಾ ಮೂರು ನಗರ ದಹನಾ | ತಾರಕ್ಷ ವಾಹನಾ | ತರುಣ ಚರ್ಮಾಂಬರ ಪೀತಾಂಬರಧರ ಶ್ರೀ ಸತಿರಮಣಾ | ಚಾರು ಚಂದ್ರಮೌಳಿ | ಶೌರಿ ಕೌಸ್ತುಭಮಾಲಾ | ಮಾರಜನಕ ಕು | ಮಾರನಪಿತ ಗಂಗಾಧರ ಧರ ಧರ||1|| ಶೂಲ ಡಮರುಗ ಹಸ್ತ | ಮೂಲೋಕ ಮೀರಿದವಸ್ತಾ | ಕೈಲಾಸವಾಸ ವೈಕುಂಠ ಪುರಾಧೀಶ ಕಾಲಾ ಕಾಲ ನಿಯಾಮಕ | ತ್ರಿಲೋಚನ ಕಮಲಾಕ್ಷಾ | ನೀಲಕಂಧರ ನಿತ್ಯ | ಪಾಲಸಾಗರಶಾಯಿ ನಂದಿಗಮನ ಕಾ | ಪಾಲಿ ಅಭಯ ಪಾಣಿ ||2|| ಭಸಿತ ಭೂಷಿತ ರುದ್ರ | ಎಸವ ಗುಣ ಸಮುದ್ರ ವಿಷಧರ ಭೂಷಣ ಕಸ್ತೂರಿ ತಿಲಕ ರಂ | ಜಿಸುವ ಜಡೆಮುಕುಟ | ಪಶುಪತಿ ಪಿನಾಕಿ | ಅಸುರಾರಾತಿ ವಿವೇಕಿ | ಅಸಮ ಸುದರುಶನ ರುಂಡಮಾಲಾಧೀಶ ಪಾಲ ಗೋಪಾಲ ||3|| ಭೂತ ಪ್ರಮಥರೊಡೆಯಾ | ಭೂತೇಶಾದಿಗಳೊಡೆಯಾ | ಶ್ವೇತ ಶರೀರ ನೀಲ | ಗಾತುರ ಸದ್ಯೋಜಾತಾ ಜಾತರಹಿತಾ | ಜ್ಯೋತಿರ್ಮಯರೂಪಾ | ಭೀತಿ ಶೂನ್ಯ ಪ್ರತಾಪಾ | ಆತುಮ ಅಂತರಾತುಮ ಪರಮೇ | ಶ ತಾಮಸ ಖ್ಯಾತಿ ಮಂಗಳಕೀರ್ತಿ ||4|| ತಂತ್ರ ಮಂತ್ರಕ್ಕೆ ಸಿಲುಕಾ | ಅಂತರಂಗ ನಿಯಾಮಕಾ | ಎಂತೆಂತು ತಿಳಿದರೆ | ಅಂಥಂಥ ಗತಿಯನ್ನು | ಸಂತತ ಕೊಡುವನೆ ಚಿಂತಿಪೆ ವರಹನ್ನ | ದಂತಜ ತೀರದಲ್ಲಿ | ನಿಂತು ವರವನೀವ | ವಿಜಯವಿಠ್ಠಲ ಗುಹಾ ಕಾಂತಾರ ನಿವಾಸಾ ||5||

Thoughts & Reflections

0

No reflections shared yet. Be the first to share your thoughts!

Share your thought