Bhasaka
← Back to home

ಹರೇ ವಿಠ್ಠಲಾ ಪಾಂಡುರಂಗ

Author: ವಿಜಯದಾಸCategory: ಶ್ರೀಕೃಷ್ಣ
ಹರೇ ವಿಠ್ಠಲಾ ಪಾಂಡುರಂಗ ಪರಿಪಾಲಯ ಕಂಸಾರೆ ಕರಕಮಲದ್ವಯ ಕಟಿಯ ಮ್ಯಾಲೆಯಿಟ್ಟ | ಪರಮ ಪುರುಷ ಶೌರೇ ಮುರಾರೇ ಜಲಜಭವಾದಿ ಸುರಸನ್ನುತ ಪಾದ ಜಲಜನಾಭನಾದ ಕಲುಷ ದೂರ ಕರುಣಾಕರ ರಂಗ ಸುಲಲಿತ ಮಹಿಮ ಹರೇ ಮುರಾರೆ ||1|| ಪುಂಡಲೀಕ ವರದಾತ ಮುಕುಂದ ಕುಂಡಲಿಶಯನ ಹರೇ | ಅಂಡಜವಾಹನ ಅಪ್ರಾಕೃತಕಾಯ ಕುಂಡಲಧರ ಹರೇ ಮುರಾರೇ ||2|| ದಿಟ್ಟತನದಿ ಹರಿಭಕ್ತ ಕೊಟ್ಟ ಇಟ್ಟಿಗಿ ಮೇಲೆ ನಿಂದ ದೇವ ಸೃಷ್ಟಿಗೊಡೆಯ ಶ್ರೀ ವಿಜಯವಿಠ್ಠಲ ದುಷ್ಟಕುಲಾಂತಕನೇ ಶ್ರೀ ಕೃಷ್ಣ ||3||

Thoughts & Reflections

0

No reflections shared yet. Be the first to share your thoughts!

Share your thought