Bhasaka
← Back to home

ಹಾರುವಗೆ ಮರದ ಮೇಲಿರುವಗೆ

Author: ವಿಜಯದಾಸCategory: ಶ್ರೀಹನುಮಂತ
ಹಾರುವಗೆ | ಮರದ ಮೇಲಿರುವಗೆ | ಮುದ್ರಿಕೆಯ ತೋರುವಗೆ | ವನ ಕೀರ್ತಿ ತೋರುವವಗೆ | ಹೀರುವವಗಾಕ್ಷಣದಿ | ಚೀರುವಗೆ ಅರ್ಭಟಿಸಿ | ಸಾರುವಗೆ | ರಾವಣನ ಮೀರಿದವಗೆ ಜಯಮಂಗಳಂ | ನಿತ್ಯ ಶುಭ ಮಂಗಳಂ 1|| ವೃಕೋದರ ಭೀಮಗೆ | ಅಶೋಕದೊಡೆಯಗೆ | ಬಕಜರಾಸಂಧ ಕೀಚಕವಧನಿಗೆ | ಸಕಲ ದಳದೊಳಗೆ | ನಾಯಕನೆನೆಸಿ ಕಲಿಯ | ಬಂಧಕ ಶಕುತಿಗೆದ್ದ ಲೌಕಿಕ ಚರಿತಗೆ | ಜಯಮಂಗಳಂ ನಿತ್ಯ ಶುಭಮಂಗಳಂ||2|| ಒಂದೆ ಅಕ್ಷರದಿಂದ ಆನಂದ ಕೊಡುವವನಿಗೆ | ಒಂದೆರಡು ಈರೈದು ಮುರಿದವನಿಗೆ | ಒಂದೇ ದೇವ ನಮ್ಮ ವಿಜಯವಿಠ್ಠಲನಂಘ್ರಿ ವಂದಿಸುವ ಶ್ರೀಮದಾನಂದ ಮುನಿಗೆ | ಜಯವiಂಗಳಂ ನಿತ್ಯ ಶುಭಮಂಗಳಂ||3||

Thoughts & Reflections

0

No reflections shared yet. Be the first to share your thoughts!

Share your thought