Bhasaka
← Back to home

ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ

Author: ವಿಜಯದಾಸCategory: ಶ್ರೀಕೃಷ್ಣ
ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ ಹಾವಿಗೆ ತಡೆಯಾಗಿಪ್ಪದು ನಿತ್ಯ ಹಾಡಿ ಮನುಜನ್ನ ಭೋಕ್ತರಿಕಾಯೈದಿ ಧನದಾತ ಸವಸನ ಭೂಷಣ ವಿದ್ಯಾ ಕನಕ ವಿನಯದಿಂದಲಿ ಇಲ್ಲಿ ತನಕ ಬಂದು ಘನವಾಗಿ ಬೇಡುವರು ಮುಕ್ತಿ ಅಹಿಕಾ ||1|| ದೇವ ಪಾದ ಪರಿಯಿಂತು ತಿಳಿದು ಕರ್ಮ ಭೂ ಮಿವಾಸ ಮಾಳ್ಪೆನೆಂದಲ್ಲಿಂದ ಇಳಿದು ಆವಾವತರು ಜಾತಿಗಳಳಿದು ನಮ್ಮ ಪಾವಮಾನಿ ಮತ ಪೊಕ್ಕು ಸುಳಿದು ||2|| ಒಂದೊಂದು ಪರಿಯಲ್ಲಿ ಸಾಗಿ ಸಾರಿ ನಿಂದಿರದೆ ಇಪ್ಪದು ಕಾವ ಲೇಸಾಗಿ ಅಂದದಿಂದಲಿ ಮೌಳಿ ತೂಗಿ ವೇಗ ಕುಂದನಿಷ್ಟವಾಯಿತು ತಾನೆ ಪೋಗಿ||3|| ಏಕಾಂಶದಲಿ ಇಲ್ಲಿ ಒಂದೆ ನಮಗೆ ಬೇಕಾದರ್ಥವ ಕೊಡುವದು ವಾಕುವರ ಸಿದ್ಧಿ ಲೋಕ ತುಂಬಿದೆ ಇದೆ ಸುಧಿಕೀರ್ತಿ ತಾ ಕೊಂಡಾಡಿದರಾಗೆ ಬಲು ಚಿತ್ತ ಶುದ್ಧಿ ||4|| ಸತ್ಯಾಗಿ ಸತ್ಯಬೋಧಯತಿ ಕೈಯ ಗುರು ಸತ್ಯಪ್ರೀಯ ಸ್ತೌತ್ಯರಾಮನ್ನ ಹಾವಿಗೆಯ ನಂಬೆ ಭೃತ್ಯವತ್ಸಲ ವಿಜಯವಿಠ್ಠಲ ಸಹಾಯ||5||

Thoughts & Reflections

0

No reflections shared yet. Be the first to share your thoughts!

Share your thought