Bhasaka
← Back to home

ಹೇಳುವೆನು ಕೇಳಿ ಕರ್ಣಾಮೃತವ

Author: ವಿಜಯದಾಸCategory: ಶ್ರೀಕೃಷ್ಣ
ಹೇಳುವೆನು ಕೇಳಿ ಕರ್ಣಾಮೃತವ ಆಲೋಚನೆ ಸಲ್ಲ ತಿಳಿದ ಜ್ಞಾನರಿಗೆ ಲಕ್ಷಣ ಛಂದಸ್ಸು ಅಡಿಪ್ರಾಸ ಆದಿ ಅಂತಿ ಲಕ್ಷಕ್ಕೊಂದಾದರು ಮೊದಲೇ ಇಲ್ಲಾ ಅಕ್ಷಿ ಇಲ್ಲದವನು ಕೋಲು ಸಂಪಾದಿಸುವ ಅಕ್ಷಿ ಉಂಟಾದವಗೆ ಅದರಿಂದ ಫಲವೇನು ||1|| e್ಞÁನ ಕರ್ಮರ ಲಂಬನ ಮಾಡಿ ತಿಳಿದಂಥ ಮಾನವನು ನಾನಲ್ಲ ಎಂದೆಂದಿಗೂ e್ಞÁನಿಗಳ ಮನೆಯ ತೊಂಡರ ಪಾದರಕ್ಷೆಯಾ ಪಾಣಿಯಲ್ಲಿ ಪಿಡಿದವನ ನಖಧೂಳಿ ದಯದಿಂದ ||2|| ರಾಗತಾಳ ಭೇದ ಜತೆ ಜಾಣತನದಿಂದ ವಾಗರ ನಿಮಿತ್ಯ ಪೇಳಲಿಲ್ಲಾ ಹ್ಯಾಗಾದರೇನು ನಾರಾಯಣಚ್ಯುತನೆಂದು ಕೂಗಿ ಕಾಲವ ಕಳದೆ ಜನುಮ ಸಾಧನಕೆ ||3|| ಬೆಲ್ಲ ಕರದಲಿ ಪಿಡಿದು ಆವನಾದರೇನು ಎಲ್ಲಿ ತಂದರೆ ಅದು ಸೀ ಎಲ್ಲವೇ ಬಲ್ಲನವ ನರಿಯನಿವನೆಂದು ಆಡದಿರಿ ಪುಲ್ಲನಾಭನ ಸ್ಮರಣೆ ಒಂದು ಮುಕ್ತಾರ್ಥ||4|| ಹರಿದೈವವೆಂದು ತಾ ಉತ್ತರೋತ್ತರ ತಿಳಿದು ಗುರುಮಧ್ವಮತದಲ್ಲಿ ಲೋಲಾಡಲು ಸಿರಿಯ ಅರಸ ವಿಜಯವಿಠ್ಠಲ ಬಂದು ವೊಲಿವನು ಗುರು ಪುರಂದರನ ದಯೆ ಎನ್ನ ಮೇಲಿರಲಾಗಿ||5||

Thoughts & Reflections

0

No reflections shared yet. Be the first to share your thoughts!

Share your thought