Bhasaka
← Back to home

ಬಾರಯ್ಯ ರಂಗ

Author: ಪುರಂದರದಾಸCategory: ಶ್ರೀಕೃಷ್ಣRaaga: ಶುಭಪಂತುವರಾಳಿTaala: ತ್ರಿತಾಲ
ಬಾರಯ್ಯ ರಂಗ ಬಾರಯ್ಯ ಕೃಷ್ಣ ಬಾರಯ್ಯ ಸ್ವಾಮಿ ಬಾರಯ್ಯ || ವಾರಣಭಯವ ನಿವಾರಣ ಮಾಡಿದ ಕಾರುಣ್ಯನಿಧಿ ಎನ್ನ ಹೃದಯಮಂದಿರಕೆ || ಇಂದೆನ್ನ ಪೂರ್ವಪಾಪಂಗಳ ಕಳೆದು ಮುಂದೆನ್ನ ಜನ್ಮ ಸಫಲವ ಗೈದು | ತಂದೆ ಶ್ರೀ ಪುರಂದರವಿಟ್ಠಲಾ ನೀನೊಲಿದು ಎಂದೆಂದಿಗಾನಂದ ಸುಖವನು ಸುರಿದು ||

Thoughts & Reflections

0

No reflections shared yet. Be the first to share your thoughts!

Share your thought