Bhasaka
← Back to home

ಬಾ ಶ್ರೀಗುರುದೇವನೆ ಬಾ

Author: ಕುವೆಂಪುCategory: ಶ್ರೀಗುರುRaaga: ಭೀಮಪಲಾಸೀTaala: ತ್ರಿತಾಲ
ಬಾ ಶ್ರೀಗುರುದೇವನೆ ಬಾ | ಶ್ಯಾಮಲ ಕಾನನ ಶೃಂಗ ತರಂಗಿತ ಸಹ್ಯಾದ್ರಿಯ ಸುಂದರ ಮಂದಿರಕೆ ಚಿನ್ಮಯ ಮಮ ಹೃನ್ಮಂದಿರಕೆ || ವಂಗಮಾತೆಯಲಿ ಜನ್ಮವನೆತ್ತಿ ದಿವ್ಯಸಮನ್ವಯ ಧರ್ಮವ ಬಿತ್ತಿ ಮತಭೇದದ ವಿಷವನು ಹೋಗಾಡಿ ಲೋಕದ ದೃಷ್ಟಿಗೆ ಸಮತೆಯ ನೀಡಿ ಕಾಪಾಡಿದ ಪಾವನ ಮೂರುತಿಯೇ || ಹೇ ನವಯುಗದವತಾರ ಪೂರ್ವದಿಗಂತದಿ ಕಾಂತಿಯು ಮೂಡಿ ನಾಡಿನ ಕತ್ತಲೆಯನು ಹೋಗಾಡಿ ಮೈದೋರುವ ತೆರದಲಿ ನೀನಿಂದು ನಮ್ಮೀ ವನಗೃಹಕೈತಂದು ನಮ್ಮೆದೆಗತ್ತಲ ಪರಿಹರಿಸಿ ಸುಖಶಾಂತಿಯ ಕಾಂತಿಯ ಬರಿಸಿ ಕೃಪಗೈ, ಓ ಮಮ ದೀನಬಂಧು ||

Thoughts & Reflections

0

No reflections shared yet. Be the first to share your thoughts!

Share your thought