Bhasaka
← Back to home

ಬಿಡು ಬಿಡು ಬಾಹ್ಯದೊಳು

Author: ಸರ್ಪಭೂಷಣ ಶಿವಯೋಗಿCategory: ಶ್ರೀಶಿವRaaga: ರಾಗಮಾಲಿಕೆTaala: ತ್ರಿತಾಲ
ಮಾಂಡ್ - ಬಿಡು ಬಿಡು ಬಾಹ್ಯದೊಳು ಡಂಭವ ಮಾನಸದೊಳು ಎಡೆಬಿಡದಿರು ಶಂಭುವ | ಮನದೊಳು ವಂಚಿಸಿ ಹೊರಗೆ ನೀ ಕೀರ್ತಿಯ ಪಡೆದರೆ ಶಿವ ನಿನಗೊಲಿಯನು ಮರುಳೆ || ಭೀಮಪಲಾಸೀ - ಜನಕಂಜಿ ನಡೆಕೊಂಡರೇನುಂಟು ಲೋಕದಿ ಮನಕಂಜಿ ನಡೆಕೊಂಬುದೇ ಚಂದ | ಜನರೇನ ಬಲ್ಲರು ಒಳಗಾಗೋ ಕೃತ್ಯವ ಮನವರಿಯದ ಕಳ್ಳತನವಿಲ್ಲವಲ್ಲ|| ಭೈರವೀ - ಮನದಲ್ಲಿ ಶಿವ ತಾ ಮನೆಮಾಡಿಕೊಂಡಿಹ ಮನಮೆಚ್ಚಿ ನಡೆದರೆ ಶಿವ ತಾ ಮೆಚ್ಚುವ | ಮನಕಂಜಿ ನಡೆಯದೆ ಜನಕಂಜಿ ನಡೆದರೆ ಮನದಾಣ್ಮ ಗುರುಸಿದ್ಧ ಮರೆಯಾಗೋನಲ್ಲ ||

Thoughts & Reflections

0

No reflections shared yet. Be the first to share your thoughts!

Share your thought