Bhasaka
← Back to home

ಆತುರದಿ ಹಾತೊರೆದು

Author: ದ.ರಾ. ಬೇಂದ್ರೆCategory: ಶ್ರೀದೇವಿRaaga: ದೇಸ್Taala: ಝಪತಾಲ
ಆತುರದಿ ಹಾತೊರೆದು ಬಂದೆ ಅವ್ವಾ ಎಂದು | ಯಾತರದು ಕಾತರವು ನಿನ್ನ ಬಳಿಗಿಂದು || ಹೆರತನದ ಹೆದರಿಕೆಯು ಹೃದಯದೊಳು ಹೊಕ್ಕಿಹುದು ನರತನದ ಹುದುರೊಳಗೆ ಜೀವ ಸಿಕ್ಕಿಹುದು | ಹೊರೆತನದ ಬಲೆಯೊಳಗೆ ಬುದ್ದಿ ಬಳಲಾಡುವುದು ಪರೆ ನಿನ್ನ ಕಿಂಕರಗೆ ಅಭಯಕರ ನೀಡೌ || ಎತ್ತೆತ್ತ ನೋಡಿದರು ಮತ್ತೆ ಬೇರೆ ಇಲ್ಲ ಅತ್ತ ನೀನೇ ಮತ್ತು ಇತ್ತ ನೀನು | ಸುತ್ತಿರುವ ಬೆದರಿಕೆಯ ಬಟ್ಟೆಯನು ಕಳದೊಗೆದು ಬತ್ತಲಾದೆನು ಅವ್ವ ಬಾಲನಂತೆ ನಾನು || ಮುಚ್ಚಿಡುವುದೇಕಿನ್ನು ಬಚ್ಚಿಡುವುದಿನ್ನೆಲ್ಲಿ ಮುಚ್ಚುಮರೆ ಮಾಳ್ಪುದಕೆ ಮುಸುಕು ಇಹುದೆಲ್ಲಿ | ನೆಚ್ಚು ಮೆಚ್ಚುಗಳನ್ನು ಬಿಚ್ಚು ಜೀವದೊಳೆತ್ತಿ ಹೊಚ್ಚಿ ಪ್ರೀತಿಯ ಸೆರಗ ಎತ್ತಿಕೋ ಎನ್ನ ||

Thoughts & Reflections

0

No reflections shared yet. Be the first to share your thoughts!

Share your thought