Bhasaka
← Back to home

ಬೇವು ಬೆಲ್ಲದೊಳಿಡಲೇನು ಫಲ

Author: ಪುರಂದರದಾಸCategory: ಶ್ರೀಕೃಷ್ಣRaaga: ಬೇಹಾಗ್Taala: ತ್ರಿತಾಲ
ಬೇವು ಬೆಲ್ಲದೊಳಿಡಲೇನು ಫಲ ಹಾವಿಗೆ ಹಾಲೆರೆದೇನು ಫಲ || ಕುಟಿಲವ ಬಿಡದಿಹ ಮನುಜರು ಮಂತ್ರವ ಪಠನೆಯ ಮಾಡಿದರೇನು ಫಲ | ಸಟೆಯನ್ನಾಡುವ ಮನುಜರು ಸಂತತ ನಟನೆಯ ಮಾಡಿದರೇನು ಫಲ || ಕಪಟತನದಲಿ ಕಾಡುತ ಜನರನು ಜಪವನು ಮಾಡಿದರೇನು ಫಲ | ಕುಪಿತತನವನು ಬಿಡದೆ ನಿರಂತರ ಉಪವಾಸ ಮಾಡಿದರೇನು ಫಲ || ಮಾತಾಪಿತರನು ಬಳಲಿಸಿದಾತನು ಯಾತ್ರೆಯ ಮಾಡಿದರೇನು ಫಲ | ಘಾತಕತನವನು ಬಿಡದೆ ನಿರಂತರ ಗೀತಯನೋದಿದರೇನು ಫಲ || ಹೀನಗುಣಂಗಳ ಹಿಂಗದೆ ಗಂಗೆಯ ಸ್ನಾನವ ಮಾಡಿದರೇನು ಫಲ | ಶ್ರೀನಿಧಿ ಪುರಂದರವಿಟ್ಠಲನ ನೆನೆಯದೆ ಮೌನವ ಮಾಡಿದರೇನು ಫಲ ||

Thoughts & Reflections

0

No reflections shared yet. Be the first to share your thoughts!

Share your thought