Bhasaka
← Back to home

ಬೋಧಿವೃಕ್ಷದಡಿ ಧ್ಯಾನದಿ

Author: ಸ್ವಾಮಿ ಹರ್ಷಾನಂದCategory: ಭಗವಾನ್ ಬುದ್ಧRaaga: ಯಮನ್
ಬೋಧಿವೃಕ್ಷದಡಿ ಧ್ಯಾನದಿ ಮುಳುಗಿಹ ಯೋಗಿವರ್ಯನೆ ನೀನಾರು | ತಪದ ತಾಪದಿಂ ದೇಹವು ಸೊರಗಿದೆ ಜ್ಯೋತಿಯು ಹಣೆಯಲಿ ಬೆಳಗುತಿದೆ || ಹೊರಗಡೆ ಕಾಂಬುದು ಜೋಗಿಯ ವೇಷ ಮುಖದಲಿ ರಾಜಕುಮಾರನ ತೇಜ | ಯಾರ ಭವನವನು ಅಂಧಕಾರದಲಿ ಮುಳುಗಿಸಿ ಬಂದಿಹೆ ಪೇಳೆಲೆ ಜವದಿ || ಜ್ಞಾನಲಾಭವೋ ದೇಹಪಾತವೋ ಆಗಲಿ ಒಂದು ಎರಡರಲಿಂದು | ಪಣವ ತೊಟ್ಟು ನೀ ಬಸವಳಿದಿರಲು ಕಲ್ಲೂ ಕರಗುತ ನೀರಾಗುವುದು || ತಾಪತ್ರಯದಲಿ ಬೆಂದಿಹ ಜನರನು ಉದ್ಧರಿಸಲು ನೀ ಬಂದಿಹೆಯೇನು | ವಿಶ್ವಪ್ರೇಮವ ಪ್ರಚಾರಗೈಯಲು ನಿಜಸುಖವನು ನೀ ತ್ಯಜಿಸಿಹೆಯೇನು ||

Thoughts & Reflections

0

No reflections shared yet. Be the first to share your thoughts!

Share your thought