Bhasaka
← Back to home

ಭಾಗ್ಯದ ಲಕ್ಷ್ಮಿ ಬಾರಮ್ಮ

Author: ಪುರಂದರದಾಸCategory: ಶ್ರೀಮಹಾಲಕ್ಷ್ಮಿRaaga: ದುರ್ಗಾTaala: ತ್ರಿತಾಲ
ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ ಸೌ- ಭಾಗ್ಯದ ಲಕ್ಷ್ಮಿ ಬಾರಮ್ಮ|| ಗೆಜ್ಜೆ ಕಾಲ್ಗಳ ಧ್ವನಿಯನು ತೋರುತ ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ || ಕನಕವೃಷ್ಟಿಯ ಕರೆಯುತ ಬಾರೆ ಮನಕೆ ಮಾನವ ಸಿದ್ದಿಯ ತೋರೆ ದಿನಕರಕೋಟಿ ತೇಜದಿ ಹೊಳೆಯುವ ಜನಕರಾಯನ ಕುಮಾರಿ ಬೇಗ || ಅತ್ತಿತ್ತಗಲದೆ ಭಕ್ತರ ಮನೆಯಲಿ ನಿತ್ಯಮಹೋತ್ಸವ ನಿತ್ಯ ಸುಮಂಗಳ ಸತ್ಯವ ತೋರುವ ಸಾಧುಸಜ್ಜನರ ಚಿತ್ತದಿ ಹೊಳೆವ ಪುತ್ಥಳಿ ಬೊಂಬೆ || ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯನು ತಿರುವುತ ಬಾರೆ ಕುಂಕುಮಾಂಕಿತೆ ಪಂಕಜಲೋಚನೆ ವೆಂಕಟರಮಣನ ಬಿಂಕದ ರಾಣಿ || ಸಕ್ಕರೆ ತುಪ್ಪ ಕಾಲುವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ ಅಕ್ಕರೆಯುಳ್ಳ ಅಳಗಿರಿರಂಗನ ಚೊಕ್ಕ ಪುರಂದರ ವಿಟ್ಠಲನ ರಾಣಿ ||

Thoughts & Reflections

0

No reflections shared yet. Be the first to share your thoughts!

Share your thought