Bhasaka
← Back to home

ಮಣಿಯಲೆನ್ನ ಶಿರವು

Author: ಕುವೆಂಪುCategory: ಶ್ರೀಗುರುRaaga: ಬಾಗೇಶ್ರೀTaala: ಏಕತಾಲ
ಮಣಿಯಲೆನ್ನ ಶಿರವು ನಿನ್ನ ಚರಣಧೂಳಿ ತಲದಲಿ | ನನ್ನ ಅಹಂಕಾರವೆಲ್ಲ ಮುಳುಗಲಶ್ರುಜಲದಲಿ || ನನಗೆ ನಾನೆ ಪೂಜೆಗೈಯೆ ಸೊಡರನೆತ್ತಲು ಬೆಳಕು ಬರುವ ಬದಲು ಅಯ್ಯೋ ಬರಿಯ ಕತ್ತಲು ಅಹಂಕಾರದಂಧಕಾರ ಮುತ್ತುತಿದೆ ಸುತ್ತಲು || ನನ್ನ ನಾನೆ ಮೆರೆಯದಂತೆ ನಾನು ಗೈವ ಕರ್ಮದಿ ನಿನ್ನ ಇಚ್ಛೆ ಪೂರ್ಣವಾಗಲೆನ್ನ ಜೀವಧರ್ಮದಿ | ತಳೆಯಲೆನ್ನ ಜ್ಞಾನ ನಿನ್ನ ಚರಮ ಶಾಂತಿಯ ಬೆಳಗಲೆನ್ನ ಪ್ರಾಣ ನಿನ್ನ ಪರಮ ಕಾಂತಿಯ ನನ್ನನಳಿಸು ನೀನೆ ನೆಲಸು ಹೃದಯಪದ್ಮದಲದಲಿ ||

Thoughts & Reflections

0

No reflections shared yet. Be the first to share your thoughts!

Share your thought