Bhasaka
← Back to home

ಮಣಿವೆ ನಿನ್ನ ಕಮಲದಡಿಗೆ

Author: ಸ್ವಾಮಿ ತದ್ರೂಪಾನಂದCategory: ಶ್ರೀರಾಮಕೃಷ್ಣRaaga: ಭೀಮಪಲಾಸೀTaala: ಏಕತಾಲ
ಮಣಿವೆ ನಿನ್ನ ಕಮಲದಡಿಗೆ ದಯದಿ ಬಾರೊ ಎದೆಯ ಗುಡಿಗೆ || ಭಕ್ತಹೃದಯಜಲಜ ಬಂಧು ನೀನಪಾರ ಕರುಣೆ ಸಿಂಧು | ಪ್ರೇಮಭಕ್ತಿಯೊಡನೆ ಕೂಡಿ ಬಾರೈ ತಂದೆ ಕರೆವೆ ಬೇಡಿ || ತ್ಯಾಗಮೂರ್ತಿ ತಪೋಮೂರ್ತಿ ಜ್ಞಾನಮೂರ್ತಿ ಸೊಗದ ಮೂರ್ತಿ | ಹರಿದಿದೆಲ್ಲೆಡೆ ನಿನ್ನ ಕೀರ್ತಿ ತ್ಯಾಗಪಥದ ನಿತ್ಯಸ್ಫೂರ್ತಿ || ವಿಶ್ವದೊಡೆಯ ಶುದ್ಧಹೃದಯ ಕೋಟಿಸೂರ್ಯ ಜ್ಯೋತಿರೂಪ | ನಿನ್ನೀ ಕಂದನ ಕರೆಯನಾಲಿಸಿ ಬಾರೋ ಬೇಗ ಶಕ್ತಿವೆರಸಿ ||

Thoughts & Reflections

0

No reflections shared yet. Be the first to share your thoughts!

Share your thought