Bhasaka
← Back to home

ಮರೆಯಬೇಡ ಮನವೆ

Author: ಪುರಂದರದಾಸCategory: ಶ್ರೀಕೃಷ್ಣRaaga: ರಾಗೇಶ್ವರೀTaala: ದಾದರಾ
ಮರೆಯಬೇಡ ಮನವೆ ನೀನು ಹರಿಯ ಸ್ಮರಣೆಯ || ಯಾಗಯಜ್ಞ ಮಾಡಲೇಕೆ ಯೋಗಿಯತಿಯು ಆಗಲೇಕೆ | ನಾಗಶಯನ ನಾರದನುತನ ಕೂಗಿ ಭಜನ ಮಾಡೋ || ಸತಿಯು ಸುತರು ಹಿತರು ಎಂದು ಮತಿಯುಗೆಟ್ಟು ಕೆಡಲಿಬೇಡ | ಗತಿಯು ತಪ್ಪಿ ಹೋಗುವಾಗ ಸತಿಯು ಸುತರು ಬರುವರೇ || ಹರಿಯ ಸ್ಮರಣೆ ಮಾತ್ರದಿಂದ ಘೋರದುರಿತವೆಲ್ಲ ನಾಶ | ಪರಮಪುರುಷ ಶ್ರೀ ಪುರಂದರ ವಿಟ್ಠಲರಾಯ ಪದವಿ ಕೊಡುವ ||

Thoughts & Reflections

0

No reflections shared yet. Be the first to share your thoughts!

Share your thought