Bhasaka
← Back to home

ಭಕ್ತೆಯಾನಪ್ಪೆನಯ್ಯಾ

Author: ಅಕ್ಕಮಹಾದೇವಿCategory: ವಚನಗಳು
ಭಕ್ತೆಯಾನಪ್ಪೆನಯ್ಯಾ ; ಕರ್ತೃಭೃತ್ಯವ ನಾನರಿಯೆ. ಮಾಹೇಶ್ವರಿಯಾನಪ್ಪೆನಯ್ಯಾ ; ವ್ರತ ನೇಮ ಲವ ನಾನರಿಯೆ. ಪ್ರಸಾದಿಯಾನಪ್ಪೆನಯ್ಯಾ ; ಅರ್ಪಿತನರ್ಪಿತವೆಂಬ ಭೇದವ ನಾನರಿಯೆ. ಪ್ರಾಣಲಿಂಗಿಯಾನಪ್ಪೆನಯ್ಯಾ ; ಅನುಭಾವದ ಗಮನವ ನಾನರಿಯೆ. ಶರಣೆಯಾನಪ್ಪೆನಯ್ಯಾ? ಶರಣಸತಿ ಲಿಂಗಪತಿ ಎಂಬ ಭಾವವ ನಾನರಿಯೆ. ಐಕ್ಯಳಾನಪ್ಪೆನಯ್ಯಾ? ಬೆರಸಿ ಭೇದವ ನಾನರಿಯೆ. ಚೆನ್ನಮಲ್ಲಿಕಾರ್ಜುನಯ್ಯಾ, ಷಟ್‍ಸ್ಥಲದಲ್ಲಿ ನಿಃಸ್ಥಲವಾಗಿಪ್ಪೆನು.

Thoughts & Reflections

0

No reflections shared yet. Be the first to share your thoughts!

Share your thought