Bhasaka
← Back to home

ಆವ ರೋಗವು ಎನಗೆ

Author: ಗೋಪಾಲದಾಸCategory: ಶ್ರೀಕೃಷ್ಣRaaga: ಜಯಜಯವಂತೀTaala: ಝಪತಾಲ
ಆವ ರೋಗವು ಎನಗೆ ದೇವ ಧನ್ವಂತ್ರಿ | ಸಾವಧಾನದಿ ಎನ್ನ ಕೈಪಿಡಿದು ನೋಡಯ್ಯ || ಹರಿಮೂರ್ತಿಗಳು ಎನ್ನ ಕಂಗಳಿಗೆ ಕಾಣಿಸವು ಹರಿಯ ಕೀರ್ತನೆಯು ಕೇಳಿಸದು ಕಿವಿಗೆ | ಹರಿಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ ಹರಿಪ್ರಸಾದವ ಜಿಹ್ವೆ ಸವಿಯದಯ್ಯ || ಹರಿಪಾದ ಸೇವೆಗೆ ಹಸ್ತಗಳು ಚಲಿಸವು ಗುರುಹಿರಿಯರಿಂಗೆ ಶಿರ ಬಾಗದು | ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ || ಅನಾಥಬಂಧು ಗೋಪಾಲವಿಟ್ಠಲರೇಯ ಎನ್ನ ಭಾಗದ ವೈದ್ಯ ನೀನೆ ನೀನೇ | ಅನಾದಿಕಾಲದ ಭವರೋಗ ಕಳೆಯಯ್ಯ ನಾನೆಂದಿಗೂ ಮರೆಯೆ ನಿನ್ನ ಉಪಕಾರ ||‌

Thoughts & Reflections

0

No reflections shared yet. Be the first to share your thoughts!

Share your thought