Bhasaka
← Back to home

ಮಾಡಿ ಮಾಡಿ ಕೆಟ್ಟರು

Author: ಬಸವಣ್ಣCategory: ಶ್ರೀಶಿವRaaga: ಗುರ್ಜರಿತೋಡಿTaala: ತ್ರಿತಾಲ
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ || ಮಾಡಿದೆನೆಂಬುದು ಮನದಲಿ ಹೊಳೆದರೆ ನೀಡಿದೆನೆಂಬುದು ನಿಜದಲಿ ತಿಳಿದರೆ ಏಡಿಸಿ ಕಾಡಿತ್ತು ಶಿವನ ಡಂಗುರ || ಮಾಡಿದೆನೆನ್ನದಿರಾ ಲಿಂಗಕೆ ನೀಡಿದೆನೆನ್ನದಿರಾ ಜಂಗಮಕೆ ಮಾಡುವ ನೀಡುವ ನಿಜಗುಣವುಳ್ಳವರ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಯ್ಯ ||

Thoughts & Reflections

0

No reflections shared yet. Be the first to share your thoughts!

Share your thought