ॐ
ಬಿಡು ಬಿಡು ಸಂಗವ, ಸುಡುಸುಡು ವಿಷಯವ,
ಎನ್ನೊಡೆಯರು ಬಾಗಿಲಿಗೆ ಬಂದರು,
ತಡೆಯದಿರಾ ಮರುಳೆ.
ಹಡಿಕೆಯ ಸಂಸಾರದ ಸುಖವ ಕಡೆಯಲ್ಲಿ ಹೇಸಿ,
ಇದಕ್ಕೆ ಹಿಡಿಯದಿರು ಸೆರಗನು.
ಚೆನ್ನಮಲ್ಲಿಕಾರ್ಜುನದೇವರು ಮನೆಗೆ ಬಂದಲ್ಲಿ ಇದಿರೇಳದಿರ್ದಡೆ ನಾಯಕ ನರಕ.
Thoughts & Reflections
0No reflections shared yet. Be the first to share your thoughts!