Bhasaka
← Back to home

ಮಾನವಸಂತಾನದೆಡೆಗೆ ಎನಿತು

Author: ವಚನವೇದCategory: ಶ್ರೀದೇವಿRaaga: ಭೈರವೀTaala: ದಾದರಾ
ಮಾನವ ಸಂತಾನದೆಡೆಗೆ ಎನಿತು ಕರುಣೆ ನಿನ್ನದು ಅದ ನೆನೆದರೆ ಕಂಬನಿಯೆ ಕೋಡಿಯೊಡೆದು ಹರಿವುದು || ಹುಟ್ಟಿದಂದಿನಿಂದ ನಾನು ನಿನ್ನಾಣೆಯ ಮೀರಿದೆ ಆದರೂ ನೀ ಅಕ್ಕರೆಯಲಿ ತಾಯ್ತನವನೆ ತೋರಿದೆ | ಮಧುರ ವಚನದಿಂದ ಮನವ ಸಂತೈಸುತ ನಲಿಸಿದೆ ಇದ ನೆನೆದರೆ ಕಂಬನಿಯೆ ಕೋಡಿಯೊಡೆದು ಹರಿದಿದೆ || ನಿನ್ನೊಲವಿನ ಹೊರೆಯ ಹೊತ್ತು ನಾನು ಬಹಳ ಬಳಲಿದೆ ಇನ್ನು ಮುಂದೆ ಹೊರಲಾರದೆ ಎದೆಯು ನರಳಿ ಕೊರಗಿದೆ | ನಿನ್ನೊಲವಿನ ಕರಸ್ಪರ್ಶದಿ ಈ ನೋವನು ನೀಗಿಸು ನಿನ್ನ ಪಾದಪದ್ಮದಲ್ಲಿ ನನ್ನನಿರಿಸಿ ಪಾಲಿಸು ||

Thoughts & Reflections

0

No reflections shared yet. Be the first to share your thoughts!

Share your thought