Bhasaka
← Back to home

ಮೂರುತಿಯನೆ ನಿಲಿಸೋ

Author: ಪುರಂದರದಾಸCategory: ಶ್ರೀಕೃಷ್ಣRaaga: ಕಾಫಿ ಕಾನಡಾTaala: ತ್ರಿತಾಲ
ಮೂರುತಿಯನೆ ನಿಲಿಸೋ ಮಾಧವ ನಿನ್ನ | ಎಳೆ ತುಳಸಿಯ ವನಮಾಲೆಯು ಕೊರಳೊಳು ಪೊಳೆವ ಪೀತಾಂಬರದಿಂದ ಒಪ್ಪುವ ನಿನ್ನ || ಮುತ್ತಿನ ಸರ ನವರತ್ನದುಂಗುರವಿಟ್ಟು ಮತ್ತೆ ಶ್ರೀಲಕುಮಿಯು ಉರದಿ ಒಪ್ಪುವ ನಿನ್ನ || ಭಕ್ತರ ಕಲ್ಪತರು ಭಾಗ್ಯದ ಸುರಧೇನು ಮುಕ್ತಿದಾಯಕ ನಮ್ಮ ಪುರಂದರ ವಿಟ್ಠಲ ||

Thoughts & Reflections

0

No reflections shared yet. Be the first to share your thoughts!

Share your thought