Bhasaka
← Back to home

ಶರಣರ ಮನ ನೋಯ ನುಡಿದೆನಾಗಿ,

Author: ಅಕ್ಕಮಹಾದೇವಿCategory: ವಚನಗಳು
ಶರಣರ ಮನ ನೋಯ ನುಡಿದೆನಾಗಿ, ಹರಜನ್ಮವಳಿದು ನರಜನ್ಮಕ್ಕೆ ಬಂದೆನು. ಹರನಟ್ಟಿದ ಬೆಸನ ಶಿರದೊಳಗಾಂತೊಡೆ, ಗಿರಿಗಳ ಭಾರವೆನಗಾದುದಯ್ಯ. ಚೆನ್ನಮಲ್ಲಿಕಾರ್ಜುನನ ಧರ್ಮದಿಂದ ಸಂಸಾರ ಕರ್ಮದ ಹೊರೆಯನಿಳುಹಿ, ನಡುದೊರೆಯ ಹಾಯಿದು ಹೋದೆನು

Thoughts & Reflections

0

No reflections shared yet. Be the first to share your thoughts!

Share your thought