Bhasaka
← Back to home

ಯಾದವ ನೀ ಬಾ

Author: ಪುರಂದರದಾಸCategory: ಶ್ರೀಕೃಷ್ಣRaaga: ಭೀಮಪಲಾಸೀTaala: ತ್ರಿತಾಲ
ಯಾದವ ನೀ ಬಾ ಯದುಕುಲನಂದನ ಮಾಧವ ಮಧುಸೂದನ ಬಾರೋ || ಸೋದರಮಾವನ ಮಥುರೆಲಿ ಮಡುಹಿದ ಯಶೋದಾಕಂದ ನೀ ಬಾರೋ || ಕಣಕಾಲಂದುಗೆ ಘುಲುಘುಲುರೆನುತಲಿ ಝಣಝಣ ವೇಣುನಿನಾದದಲಿ | ಚಿಣ್ಣಿಕೋಲು ಚೆಂಡು ಬುಗುರಿಯನಾಡುತ ಸಣ್ಣವರೊಡಗೂಡಿ ನೀ ಬಾರೋ || ಶಂಖ ಚಕ್ರವು ಕೈಯಲಿ ಹೊಳೆಯುತ ಬಿಂಕದ ಗೋವಳ ನೀ ಬಾರೋ | ಅಕಳಂಕ ಚರಿತನೆ ಆದಿನಾರಾಯಣ ಬೇಕೆಂಬ ಭಕ್ತರಿಗೊಲಿ ಬಾರೋ || ಖಗವಾಹನನೆ ಬಗೆಬಗೆರೂಪನೆ ನಗೆಮೊಗದರಸನೆ ನೀ ಬಾರೋ | ಜಗದೊಳು ನಿನ್ನಯ ಮಹಿಮೆಯ ಪೊಗಳುವೆ ಪುರಂದರವಿಟ್ಠಲ ನೀ ಬಾರೋ ||

Thoughts & Reflections

0

No reflections shared yet. Be the first to share your thoughts!

Share your thought