Bhasaka
← Back to home

ಯಾರನು ಬಯಸಿ

Author: ಸ್ವಾಮಿ ಹರ್ಷಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ಅಢಾಣಾTaala: ತ್ರಿತಾಲ
ಯಾರನು ಬಯಸಿ ಶ್ರೀಭುವನೇಶ್ವರಿ ಹರಕೆಯ ಹೊತ್ತಳೊ ವೀರೇಶ್ವರನಲಿ ವೀರೇಶ್ವರ ಶಿವ ಯಾವನ ರೂಪದಿ ಧರೆಯನು ಪಾವನಗೈದನೊ ಅಂತಹ ವೀರ ವಿವೇಕಾನಂದ ನಮೋ || ಯಾವನ ಲೀಲೆಯ ಸಹಿಸದೆ ಮಾತೆಯು 'ಶಿವನೇ ನೀ ಬಾರೆನ್ನುತ ಮೊರೆಯಿಡೆ ಇವನನು ಏತಕೆ ಕಳುಹಿದೆ?' ಎನ್ನುತ ಯಾವನ ಹಂಗಿಸುತಿದ್ದಳೊ ಅಂತಹ ವೀರ ವಿವೇಕಾನಂದ ನಮೋ || ಇರುವನೊ ದೇವರು? ಇಲ್ಲವೋ?' ಎನ್ನುತ ಗುರುವನು ಭರದಿಂ ಪ್ರಶ್ನಿಸಿ ಕೂಡಲೆ 'ಇರುವನು ತೋರುವೆ ನಿನಗೂ!' ಎನ್ನುವ ಮರುದನಿಯಿಂದ ಚಕಿತನಾದಂತಹ ವೀರ ವಿವೇಕಾನಂದ ನಮೋ || ರಾಮಕೃಷ್ಣರಲಿ ಸೇವಾವೃತ್ತಿಯ ಪ್ರೇಮದಿ ಮಾಡುತ ಸಾಧನೆಗೈಯುತ ಬ್ರಹ್ಮದ ಅನುಭವ ಬೇಗನೆ ಪಡೆಯುತ ಕಾಮಿನಿ-ಕಾಂಚನ-ಬಂಧನ ನೀಗಿದ ವೀರ ವಿವೇಕಾನಂದ ನಮೋ || ಗುರುವಿನ ಪ್ರಸ್ಥಾನಾನಂತರದಲಿ ವಿರಾಗ ಪಡೆಯುತ ಕಾವಿಯ ಧರಿಸುತ ಭಾರತ ಭುವಿಯಲಿ ಸುತ್ತುತ ತಿರುಗುತ ವಿರಸವ ವೀಕ್ಷಿಸಿ ದುಃಖಿಸಿದಂತಹ ವೀರ ವಿವೇಕಾನಂದ ನಮೋ || ದೇಶವಿದೇಶದಿ ವೇದದ ತತ್ತ್ವವ ಪ್ರಸಾರ ಮಾಡುತ ಸರ್ವರ ಹೃದಯದಿ ಈಶಪ್ರೇಮವ ಮೊಳೆಯಿಸಿ ಬೆಳೆಯಿಸಿ ಶ್ರೀಶನ ಚರಣದಿ ಲಯವಾದಂತಹ ವೀರ ವಿವೇಕಾನಂದ ನಮೋ ||

Thoughts & Reflections

0

No reflections shared yet. Be the first to share your thoughts!

Share your thought