← Back to home
ಯಾರ ಪ್ರೇಮದ ಪರಮಪೂರವು
Author: ಹೆಚ್ ಎನ್ ಮುರಳೀಧರCategory: ಶ್ರೀರಾಮಕೃಷ್ಣRaaga: ತಿಲಂಗ್Taala: ತೇವರಾ
ॐ
ಯಾರ ಪ್ರೇಮದ ಪರಮಪೂರವು ನೀಚರೆದೆಗೂ ಹರಿಯಿತೋ,
ಯಾವ ಲೋಕಾತೀತಮಹಿಮನ ಕರುಣೆ ಲೋಕಕೆ ದುಡಿಯಿತೋ,
ಯಾವನಪ್ರತಿ - ಮಹಿಮನೋ ಮೇಣ್ ಮಾತೆ ಸೀತೆಯ ನಾಥನೋ,
ಯಾರು ಸೀತೆಯ ಭಕುತಿಯಿಂದಲಿ ಜ್ಞಾನದೇಹದಿ ವ್ಯಾಪ್ತನೋ;
ಯಾರು ಮಧುತರ ಶಾಂತಗೀತೆಯ ಯುದ್ಧರಂಗದಿ ಮೊಳಗುತ
ಪ್ರಳಯಶಬ್ದವ ಸ್ತಬ್ದಗೊಳಿಸುತ ಸಿಂಹನಾದವ ಸಿಡಿಸುತ
ಮೋಹತಿಮಿರವನಿಲ್ಲಗೈಯುತ ಕೃಷ್ಣರೂಪದಿ ನಿಂದನೋ
ಅವನೆ ಇಂದಿಗೆ ರಾಮಕೃಷ್ಣನ ಹೆಸರೊಳಸೆಯುತಲಿರುವನು |
Thoughts & Reflections
0No reflections shared yet. Be the first to share your thoughts!