Bhasaka
← Back to home

ಯಾರ ಮಹಿಮಾ ಜ್ಯೋತಿ

Author: ವಚನವೇದCategory: ಪರಬ್ರಹ್ಮRaaga: ರಾಗಮಾಲಿಕೆTaala: ತೇವರಾ
ದುರ್ಗಾ - ಯಾರ ಮಹಿಮಾ ಜ್ಯೋತಿ ಜಗವನು ಅಮೃತದಂದದಿ ಎಲ್ಲರೆದೆಯನು ತುಂಬಿ ರೋಮಾಂಚನವ ಗೈವುದೋ ಅಂಥ ಪ್ರೇಮದ ಜಲಧಿಯ ಜೀವ ನಿನ್ನೊಳಗಿರುವವರೆಗೂ ಸಾರು ಆತನ ಮಹಿಮೆಯ || ಭೀಮಪಲಾಸೀ - ಯಾರ ಶ್ರೀಶುಭನಾಮ ಹೃದಯದ ಕೊರಗನೆಲ್ಲ ಕಳೆವುದೋ ಯಾರು ನೆಲ ಜಲ ಗಗನ ದೇಶವ - ನೆಲ್ಲ ವ್ಯಾಪಿಸಿ ನಿಲುವರೋ || ಬೇಹಾಗ್ - ಯಾರ ಅನ್ವೇಷಣೆಯಲೀ ಜಗ ಬರಿದೆ ತೊಳಲುತಲಿರುವುದೋ ಅಂಥ ದೇವನ ತಿಳಿದು ಬಣ್ಣಿಪ ಶಕ್ತಿ ಯಾರಿಗೆ ಲಭಿಸಿದೆ ಅವನ ಮಹಿಮೆಗೆ ಪಾರವೆಲ್ಲಿದೆ ಆದಿ ಅಂತ್ಯಗಳೆಲ್ಲಿವೆ || ಪೂರಿಯಾ ಧನಾಶ್ರೀ - ನಿಜದ ತಿಳಿವಿನ ತವರು ಅವನು ನಿತ್ಯ ಜೀವನ ಚೇತನ ನಿತ್ಯ ಜಾಗೃತ ನಿರ್ನಿಮೇಷನು ದಿವ್ಯ ಶುದ್ಧ ನಿರಂಜನ ಅವನ ದರುಶನ ಎದೆಯ ಕಿಲುಬನು ತೊಳೆದು ಗೈವುದು ಪಾವನ ||

Thoughts & Reflections

0

No reflections shared yet. Be the first to share your thoughts!

Share your thought