Bhasaka
← Back to home

ಇನಿತಾದರೂ ನಿನಗೆ ಮತಿಯಿಲ್ಲವೆ

Author: ವಿಜಯದಾಸCategory: ಶ್ರೀಕೃಷ್ಣRaaga: ಮೋಹನTaala: ಝಂಪೆತಾಳ
ಇನಿತಾದರೂ ನಿನಗೆ ಮತಿಯಿಲ್ಲವೇ ಮನವೆ | ಹೀನಾಯ ಮಾಡದಿರು ಪರದೋಷಗಳನೆಣಿಸಿ || ಅವನ ಬಯ್ಯುವೆ ಯಾಕೆ ಅವನ್ಯಾರು ನೀನ್ಯಾರು ಅವನ ಪಾಪಕೆ ನೀನು ಭಾಗಿಯಾದೆ | ಅವನು ಉತ್ತಮನಾದರವನು ಬದುಕಿದ ಕಾಣೊ ಅವ ಪುಣ್ಯ ಮಾಡಿದರೆ ಅವನ ಕುಲ ಉದ್ದಾರ || ನೀನು ಪಡೆವುದರಲ್ಲಿ ಬೇಡಬಂದವನಲ್ಲ ನಿನಗು ಅವನಿಗು ಏನು ಸಂಬಂಧವೊ | ಮನೆ ಒಡವೆ ವಸ್ತ್ರಗಳ ಭಾಗ ಕೇಳುವುದಿಲ್ಲ ಕ್ಷಣಕ್ಷಣಕೆ ಸಂದೇಹ ಮಾಡಿಕೊಂಬುದು ಸಲ್ಲ || ನಿನ್ನ ಗತಿ ಮಾರ್ಗಕ್ಕೆ ಅವ ನಡೆದು ಬರುವನೇ ನಿನ್ನಿಂದ ಪರಲೋಕ ಅವಗೆ ಉಂಟೆ | ನಿನ್ನೊಳಗೆ ನೀ ತಿಳಿದು ಶ್ರೀವಿಜಯವಿಟ್ಠಲನ್ನ ಸನ್ನುತಿಸಿ ಭವರೋಗವನು ಕಳೆದುಕೊಳ್ಳಯ್ಯ ||

Thoughts & Reflections

0

No reflections shared yet. Be the first to share your thoughts!

Share your thought