Bhasaka
← Back to home

ರಾಘವ ನೀ ಬಾ

Author: ಸ್ವಾಮಿ ಹರ್ಷಾನಂದCategory: ಶ್ರೀರಾಮRaaga: ಭೀಮಪಲಾಸೀTaala: ತ್ರಿತಾಲ
ರಾಘವ ನೀ ಬಾ ರಘುಕುಲನಂದನ ಅಘಮರ್ಷಣನೇ ನೀ ಬಾರೋ | ದಶಮುಖರಾವಣನ ಲಂಕೆಲಿ ಮಡುಹಿದ ಕೌಸಲ್ಯಾತನಯನೇ ನೀ ಬಾರೋ || ಧನುರ್ಬಾಣವ ಕರದಲಿ ಧರಿಸಿದ ದನುಜಕುಲಾಂತಕ ನೀ ಬಾರೋ | ಇನವಂಶವನು ಪಾವನಗೈದ ಮನುಜಶ್ರೇಷ್ಠನೇ ನೀ ಬಾರೋ || ಅಹಲ್ಯೋದ್ದಾರಕ ತಾಟಕಿಘಾತಕ ಅಹರಹ ಭಜಿಸುವೆ ನೀ ಬಾರೋ | ಇಹದಲಿ ಪರದಲಿ ಗತಿ ನೀನೆನ್ನುತ ತಹತಹ ಪಡುತಿಹೆ ನೀ ಬಾರೋ || ಪಿತೃಭಕ್ತನೇ ಸತ್ಯಶೀಲನೇ ಸತತವು ನಿನ್ನನೇ ಸ್ತುತಿಸುವೆ ಬಾರೋ | ನತಜನರನು ಪರಿಪಾಲಿಸುವವನೇ ಸೀತಾರಮಣಾ ನೀ ಬಾರೋ ||

Thoughts & Reflections

0

No reflections shared yet. Be the first to share your thoughts!

Share your thought