Bhasaka
← Back to home

ರಾಮಕೃಷ್ಣಾನಂದ ಸ್ವಾಮಿಯೆ

Author: ಸ್ವಾಮಿ ಹರ್ಷಾನಂದCategory: ಇತರೆRaaga: ಭೂಪಾಲೀTaala: ತೇವರಾ
ರಾಮಕೃಷ್ಣಾನಂದ ಸ್ವಾಮಿಯೆ ನಮ್ಮ ನಮನವು ನಿನಗೆ ಯತಿಯೆ || ವೇದಶಾಸ್ತ್ರದ ಜ್ಞಾನನಿಧಿಯೆ ಭೇದದರ್ಶನ ರಹಿತ ಸಂತನೆ ವಾದದೂರನೆ ಶಾಂತಿಪ್ರಿಯನೆ ನಮ್ಮನಮನವು ನಿನಗೆ ಯತಿಯೆ || ಹರಿಯ ಪಾದದಿ ಪರಮಭಕುತಿಯು ಗುರುವಿನಡಿಯಲಿ ಅದಕು ಮಿಗಿಲು ಹರಸುತೆಮ್ಮನು ಶಮನಗೊಳಿಸು ನಮ್ಮ ನಮನವು ನಿನಗೆ ಯತಿಯೆ || ತ್ಯಾಗಯೋಗದ ಯುಗಳಮೂರ್ತಿಯೆ ಭಾಗ್ಯವೆಮ್ಮದು ನಿನ್ನ ಕರುಣೆಯೆ ಹೋಗಲಾಡಿಸು ಭವದ ಬವಣೆ ನಮ್ಮ ನಮನವು ನಿನಗೆ ಯತಿಯೆ ||

Thoughts & Reflections

0

No reflections shared yet. Be the first to share your thoughts!

Share your thought