Bhasaka
← Back to home

ರಾಮಕೃಷ್ಣ ಪದಾಂಬುಜದಿ

Category: ಶ್ರೀರಾಮಕೃಷ್ಣRaaga: ಖಮಾಜ್Taala: ಏಕತಾಲ
ರಾಮಕೃಷ್ಣ ಪದಾಂಬುಜದಿ ನಲಿಯೋ ಎನ್ನ ಮನದ ಭ್ರಮರ | ಮುಳ್ಳಿನಿಂ ಮುಸುಕಿದೆ ವಿಷಯಕೇದಗೆ ನಿಲ್ಲದಿರಲ್ಲಿ ನೀ ಮೈಯನು ಮರೆತು || ಜನುಮ ಮರಣ ವಿಷಮ ವ್ಯಾಧಿಯ ಎನಿತು ಕಾಲ ಸಹಿಪೆ ಇನ್ನು| ಪ್ರೇಮಸುಧೆಯ ಸವಿ ಶ್ರೀಪದದಿ ಭವದ ಯಾತನೆ ಉಳಿಯದಿನ್ನು || ಧರ್ಮಾಧರ್ಮ - ಸುಖ - ದುಃಖ - ಶಾಂತಿ - ತಾಪ ದ್ವಂದ್ವದಲ್ಲಿರಲು ಮುಕ್ತಿಯದೆಲ್ಲಿ | ಜ್ಞಾನಖಡ್ಗದಿ ಪರಮ ಯತ್ನದಿ ಕತ್ತರಿಸು ನೀ ಕರ್ಮದ ಪಾಶವ || ರಾಮಕೃಷ್ಣನಾಮ ನಾಲಿಗೆ ನುಡಿಯಲಿ ಮೋಹದ ಕತ್ತಲು ಕಳೆವುದಾಗ | ದುಃಸ್ವಪ್ನ ಜ್ವಾಲೆ ಆರುವುದಾಗ ಮತ್ತಿನ ನಿದ್ರೆಯು ಉಳಿಯದಿನ್ನು ||

Thoughts & Reflections

0

No reflections shared yet. Be the first to share your thoughts!

Share your thought