Bhasaka
← Back to home

ಸಂಜೆಯಾಗಲು ತವಕಿಪುದು

Author: ಕುವೆಂಪುCategory: ಶ್ರೀರಾಮಕೃಷ್ಣ
ಸಂಜೆಯಾಗಲು ತವಕಿಪುದು ಮನ ದಕ್ಷಿಣೇಶ್ವರ ಯಾತ್ರೆಗೆ | ಪರಮಹಂಸರ ತೀರ್ಥವಾಣಿಯ ಪಂಚ ಅಮೃತದ ಪಾತ್ರೆಗೆ || ಗುಪ್ತದಫ್ತರ ಬರೆಯುತಿರ್ಪ ಮಹೇಂದ್ರಗುಪ್ತನ ನೋಡುವೆ | ಪ್ರಶ್ನವರ್ಷವ ಕರೆಯುತಿರ್ಪ ನರೇಂದ್ರ ವಾದವನಾಲಿಪೆ || ಅತ್ತ ಕೇಶವಚಂದ್ರಸೇನನ ಭಕ್ತಿನಮನವ ಕಾಣುವೆ | ಇತ್ತ ಮತ್ತ ಗಿರೀಶಘೋಷನ ಚಂದ್ರ ಚಿತ್ತದಿ ತೊಯ್ಯುವೆ || -ಕುವೆಂಪು

Thoughts & Reflections

0

No reflections shared yet. Be the first to share your thoughts!

Share your thought