Bhasaka
← Back to home

ಈ ಪರಿಯ ಸೊಬಗಾವ

Author: ಪುರಂದರದಾಸCategory: ಶ್ರೀಕೃಷ್ಣRaaga: ಬಾಗೇಶ್ರೀTaala: ಝಪತಾಲ
ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ ಗೋಪೀಜನಪ್ರಿಯ ಗೋಪಾಲಗಲ್ಲದೆ || ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ ಸಿರಿಯತನದಲಿ ನೋಡೆ ಶ್ರೀಕಾಂತನು | ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯಾ ಗುರುವುತನದಲಿ ನೋಡೆ ಜಗದಾದಿಗುರುವು || ಪಾವನತ್ವದಿ ನೋಡೆ ಅಮರಗಂಗಾಜನಕ ದೇವತ್ವದಲಿ ನೋಡೆ ದಿವಿಜರೊಡೆಯ | ಲಾವಣ್ಯದಲಿ ನೋಡೆ ಲೋಕಮೋಹಕನಯ್ಯಾ ಆವ ಧೈರ್ಯದಿ ನೋಡೆ ಅಸುರಾಂತಕನು || ಗಗನದಲಿ ಸಂಚರಿಪ ಗರುಡದೇವನೆ ತುರಗ ಜಗತೀಧರ ಶೇಷ ಪರ್ಯಂಕಶಯನ | ನಿಗಮಗೋಚರ ನಮ್ಮ ಪುರಂದರವಿಟ್ಠಲಗಲ್ಲದೆ ಮಿಗಿಲಾದ ದೈವಗಳಿಗೀ ಭಾಗ್ಯವುಂಟೇ ||

Thoughts & Reflections

0

No reflections shared yet. Be the first to share your thoughts!

Share your thought