Bhasaka
← Back to home

ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ

Author: ಕನಕದಾಸCategory: ಇತರೆRaaga: ಧನ್ಯಾಸಿTaala: ಆದಿತಾಳ
ಸ್ನಾನವ ಮಾಡಿರೊ ಜ್ಞಾನತೀರ್ಥದಲ್ಲಿ ಮಾನವರೆಲ್ಲ ಮೌನದೊಳಗೆ ನಿಂದು ||ಪ|| ತನ್ನ ತಾನರಿತುಕೊಂಬುದೆ ಒಂದು ಸ್ನಾನ ಅನ್ಯಾಯ ಮಾಡದಿರುವುದೊಂದು ಸ್ನಾನ ಅನ್ನದಾನವ ಮಾಡುವುದೊಂದು ಸ್ನಾನ- ಹರಿ ನಿನ್ನ ಧ್ಯಾನವೆ ನಿತ್ಯ ಗಂಗಾಸ್ನಾನ ||1|| ಪರಸತಿಯ ಭ್ರಮಿಸದಿದ್ದರೆ ಒಂದು ಸ್ನಾನ ಪರನಿಂದೆಯ ಮಾಡದಿದ್ದರೊಂದು ಸ್ನಾನ ಪರೋಪಕಾರ ಮಾಡುವುದೊಂದು ಸ್ನಾನ ಪರತತ್ತ್ವವನರಿತುಕೊಂಬುದೆ ಒಂದು ಸ್ನಾನ ||2|| ಸಾಧು ಸಜ್ಜನರ ಸಂಗವೆ ಒಂದು ಸ್ನಾನ ಭೇದಾಭೇದವಳಿದಡೆ ಒಂದು ಸ್ನಾನ ಆದಿಮೂರುತಿ ಕಾಗಿನೆಲೆಯಾದಿಕೇಶವನ ಪಾದಧ್ಯಾನವೆ ನಿತ್ಯ ಗಂಗಾ ಸ್ನಾನ ||3||

Thoughts & Reflections

0

No reflections shared yet. Be the first to share your thoughts!

Share your thought