Bhasaka
← Back to home

ಜಯ ದೇವ ದೇವ ಕರುಣಾವತಾರ

Author: ಸ್ವಾಮಿ ವಾಗೀಶ್ವರಾನಂದCategory: ಶ್ರೀರಾಮಕೃಷ್ಣRaaga: ಪೂರ್ವೀTaala: ತ್ರಿತಾಲ
ಜಯ ದೇವ ದೇವ ಕರುಣಾವತಾರ ಜಗದೇಕಗಮ್ಯ ಸಂಸಾರಸಾರ|| ಮಾಯಾವಿಹೀನ ಸಚ್ಚಿತ್ ಸ್ವರೂಪ ಲೀಲಾವಿಲಾಸ-ಧೃತಿವಿವಿಧರೂಪ| ರಾಜಾಧಿರಾಜ ಭುವನೈಕರೂಪ ಭೂತಾಧಿವಾಸ ಭವಕರ್ಣಧಾರ|| ಚೈತನ್ಯನಾಥ ಸ್ವಾನಂದಕಂದ ಭವರೋಗವೈದ್ಯ ಜಿತ ನಿಖಿಲಬಂಧ। ಅತುಲಪ್ರತಾಪ ರಿಪುದಲಕರಾಲ ಸಾಧಕವಿಶುದ್ಧಮಾನಸವಿಹಾರ|| ವಿಶ್ವಪ್ರಣಮ್ಯ ತ್ರಯತಾಪನಾಶ ಕಾಮಾದಿದೋಷಹರ ಚಿತ್ಪಕಾಶ! ಪ್ರಣತೋSಸ್ಮಿನಾಥ ಶರಣಂ ಪ್ರಯಚ್ಚ ಹೇ ರಾಮಕೃಷ್ಣ ಭವಭಯನಿವಾರ ||

Thoughts & Reflections

0

No reflections shared yet. Be the first to share your thoughts!

Share your thought