Bhasaka
← Back to home

ಜಯ ದೇವ ಜಯ ದೇವ ಜಯ ರಾಮಕೃಷ್ಣ

Author: ಹೆಚ್ ಎನ್ ಮುರಳೀಧರCategory: ಶ್ರೀರಾಮಕೃಷ್ಣRaaga: ಕೀರ್ತನTaala: ದಾದರಾ
ಜಯ ದೇವ ಜಯ ದೇವ ಜಯ ರಾಮಕೃಷ್ಣ ಸಾರದಾ ಶ್ರೀಪತಿ ಭಕ್ತಜನರ ಗತಿ ಯುಗದ ಅವತಾರ|| ತುತ್ತಿನ ವಿದ್ಯೆಗೆ ದೂರದಿ ನಿಂದೆ ದೇವನ ವಿದ್ಯೆಯ ಗಳಿಸುವೆನೆಂದೆ| ಧನಿಯಿಂದ ಭಿಕ್ಷೆಯ ಪಡೆಯುತಲಂದೆ ಸತ್ಯದ ನೆಲೆಗೆ ನೀ ಸ್ಥಿರವಾಗಿ ಸಂದೆ|| ಶಿಲೆಯಲ್ಲವೀ ತಾಯಿ ನಿಜದ ಜಗದಂಬೆ ಕಂಬನಿ ಧಾರೆಗೆ ಕರಗುವಳೆಂದೆ| ತಾಯಿ ತಾಯಿ ಎಂದು ಕೂಗುತ ನೊಂದೆ ಲೋಕವೆಲ್ಲವ ತಾಯ ಮಡಿಲಾಗಿ ಕಂಡೆ|| ಚಲಿಸದ ಬ್ರಹ್ಮವು ಚಲಿಸಲು ಶಕ್ತಿ ಸುರುಳಿ ಸುತ್ತಿದ ಹಾವು ಹರಿವ ಸಂಗತಿ| ಜ್ಞಾನವೊ ಭಕ್ತಿಯೊ ಸಿದ್ದಿಯ ಯುಕುತಿ ತಿನ್ನು ಮಾವಿನಹಣ್ಣು ಜೀವಕೆ ತೃಪ್ತಿ || ಮತಗಳೆನಿತೊ ಅನಿತೆ ಪಥಗಳು ಎಂದೆ ಹೆಸರದು ಹಲವಾರು ಉಸಿರು ತಾನೊಂದೆ! ಸಾಧನೆಯ ದಾರಿ ತೆರೆದು ತೋರಿದೆ ಹೆಸರಿನಾಚೆಯ ಬೆಳಕ ಭುವಿಗೆ ನೀಡಿದೆ|| ವಚನವೇದದ ಘೋಷ ಭವತಿಮಿರ ನಾಶ ಸಂದೇಹವಿನಿತಿಲ್ಲ ಇದು ಸ್ವಪ್ರಕಾಶ| ದೇವದೇವಿಯರೆಲ್ಲ ನಿನ್ನಲ್ಲೇ ವಾಸ ಅಂಶ ಅಂಶಕೆ ಬಂತು ಪೂರ್ಣದ ಸ್ಪರ್ಶ|| ವಿವೇಕ ರಾಖಾಲ ಶಿಷ್ಯ ಸಂತತಿ ಸಂಘರೂಪದಿ ಹರಡಿ ನವಯುಗ ಕೀರ್ತಿ| ತ್ಯಾಗಕೆ ಸೇವೆಗೆ ಅಳಿಯದ ಸ್ಫೂರ್ತಿ ಕೃಪೆಯ ಧಾರೆಯು ಸುರಿದು ನಿತ್ಯಸಂತೃಪ್ತಿ||

Thoughts & Reflections

0

No reflections shared yet. Be the first to share your thoughts!

Share your thought