Bhasaka
← Back to home

ದಯಾಸಾಗರ ನೀನು ದಾತಾರನೈ ನೀನು

Author: ಸ್ವಾಮಿ ಪುರುಷೋತ್ತಮಾನಂದCategory: ಶ್ರೀರಾಮಕೃಷ್ಣRaaga: ರಾಗಮಾಲಿಕೆTaala: ಝಪತಾಲ
ದಯಾಸಾಗರ ನೀನು ದಾತಾರನೈ ನೀನು ನಾನೇಕೆ ದೀನನಾಗುಳಿಯಲಿನ್ನು || ಹೇ ದೇವ ನೀನೆನಗೆ ನೀಡಿರುವೆ ಕಣ್ಣೆರಡ ಆದರವು ಕಾಣಲಾರವು ನಿನ್ನನು | ನೀನಾದರೂ ನಿನ್ನ ಸಾಸಿರದ ನಯನದಿಂ ನನ್ನ ದುರವಸ್ಥೆಯನು ಕಾಣೆಯೇನು || ನನಗೊಂದು ಹೃದಯವಿದೆ ಅದ ಕೊಟ್ಟವನು ನೀನೆ ಆದರದು ಬತ್ತಿರುವ ಕೆರೆಯಂತಿದೆ ನಿನ್ನ ಹೃದಯಸರೋವರದ ಸುಧೆಯನೊಂದಿಷ್ಟು ನನ್ನೆದೆಗೆ ನೀನೇ ಹರಿಸಬಾರದೆ|| ಆನಂದಘನ ನೀನು ನಿನ್ನ ಪುತ್ರನು ನಾನು ಬರಲಿ ಆ ಆನಂದ ಎನ್ನ ಎದೆಗೂ| ನೀನು ನನ್ನವನಯ್ಯ ನಾನಂತು ನಿನ್ನವನೇ ಇನ್ನೇಕೆ ಚಿಂತಿಸಲಿ ಯಾವ ಬಗೆಗೂ||

Thoughts & Reflections

0

No reflections shared yet. Be the first to share your thoughts!

Share your thought