Bhasaka
← Back to home

ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ

Author: ಸ್ವಾಮಿ ಪುರುಷೋತ್ತಮಾನಂದCategory: ಶ್ರೀದೇವಿRaaga: ಶಿವರಂಜಿನಿTaala: ಝಪತಾಲ
ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ ಕರಕರೆಯಿದೆಂದೆನದೆ ಓಡಿ ಬಾರಮ್ಮಾ|| ಯಾರ ದೋಷಗಳೆಷ್ಟು ನನಗೇಕೆ ಬೇಕು। ನನ್ನ ದೋಷವ ತಿದ್ದಿ ನೀ ಸಲಹಬೇಕು|| ಪಾಪಿಗಳನುದ್ಧರಿಪ ನೀ ದಯಾಸಿಂಧು| ನೀಡೆನಗೆ ಕರುಣೆಯಿಂ ಆ ಕೃಪೆಯ ಬಿಂದು|| ತಾಯಿ ನೀನಿರುತಿರಲು ತಬ್ಬಲಿಯೆ ನಾನು| ವಾತ್ಸಲ್ಯಸುಧೆಯುಣಿಸಲಾರೆಯಾ ನೀನು|| ಜ್ಞಾನ ಭಕ್ತಿ ವಿವೇಕ ವೈರಾಗ್ಯ ನೀಡು| ಎನ್ನ ಹೃನ್ಮಂದಿರದಿ ನಿತ್ಯ ನಲಿದಾಡು||

Thoughts & Reflections

0

No reflections shared yet. Be the first to share your thoughts!

Share your thought