Bhasaka
← Back to home

ವನಸುಮದೊಲೆನ್ನ

Author: ಡಿ.ವಿ.ಜಿ.Category: ಶ್ರೀಗುರುRaaga: ಅಸಾವೇರೀTaala: ಝಪತಾಲ
ವನಸುಮದೊಲೆನ್ನ ಜೀ - ವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ || ಜನಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ || ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿ ನಲವಿಂ | ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿ - ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ || ಉಪಕಾರಿ ನಾನು ಎ - ನ್ನುಪಕೃತಿಯು ಜಗಕೆಂಬ ವಿಪರೀತಮತಿಯನುಳಿದು | ವಿಪುಲಾಶ್ರಯವನೀವ ಸುಫಲ ಸುಮಭರಿತ ಪಾ - ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು ||

Thoughts & Reflections

0

No reflections shared yet. Be the first to share your thoughts!

Share your thought