Bhasaka
← Back to home

ವಿಪ್ರವನಿತೆಯಂಕದಲ್ಲಿ

Category: ಶ್ರೀರಾಮಕೃಷ್ಣRaaga: ಕಾಂಬೋಧಿTaala: ರೂಪಕತಾಳ
ವಿಪ್ರವನಿತೆಯಂಕದಲ್ಲಿ ನಲಿವನಾರು ಬೆಳಕ ಚೆಲ್ಲಿ| ಧರಿಸಿ ದಿಶೆಯ ಚೆಲುವ ಕುವರ ಒಲಿದು ಬಂದೆ ಬಡಕುಟೀರ || ಭೂತಲಕೆ ಇಳಿದು ಬಂದೆ ಯಾರು ನೀನು ಕಣ್ಮಣಿ | ಆರ್ತ ಜನರ ತಾಪ ಕಳೆಯೆ ಸುರಿಸಿ ಕರುಣೆ ಕಂಬನಿ || ನೊಂದ ಜನಕೆ ನೆರವ ನೀಡೆ ಬಂದೆಯೇನು ಗೋಪ್ಯವಾಗಿ | ಕಂದ ಮೊಗದಿ ಕರುಣೆ ತಳೆದು ಅಳುವೆ ನಗುವೆ ಯಾರಿಗಾಗಿ || ರೂಪರಾಶಿ ಕಂಡು ನಿನ್ನ ಸೆಳೆಯಲಾರೆ ನೆಟ್ಟ ಕಣ್ಣ| ತಾಪತಿಮಿರನಾಶಿ ನಿನ್ನ ತೋಳಲೆತ್ತಿಕೊಂಬೆ ಚಿನ್ನ ||

Thoughts & Reflections

0

No reflections shared yet. Be the first to share your thoughts!

Share your thought