Bhasaka
← Back to home

ಶಕ್ತನಾದರೆ

Author: ಪುರಂದರದಾಸCategory: ಶ್ರೀಕೃಷ್ಣRaaga: ಕಾಂಬೋಧಿTaala: ಝಂಪೆತಾಳ
ಶಕ್ತನಾದರೆ ನೆಂಟರೆಲ್ಲ ಹಿತರು | ಅ- ಶಕ್ತನಾದರೆ ಅವರೆ ವೈರಿಗಳು ಲೋಕದಲಿ || ಕಮಲ ಆರ್ಕನಲಿರುವ ಕಡು ನೆಂಟತನದಿಂದ ವಿಮಲ ಜಲದೊಳಗೆ ಅದು ಆಡುತಿಹುದು | ಕ್ರಮಗೆಟ್ಟು ನೀರಿಂದ ತಡಿಗೆ ಬೀಳಲು ರವಿಯ ಅಮಿತ ಕಿರಣಗಳಿಂದ ಕಂದಿಹೋಗುವುದು || ವನಸುತ್ತಿ ಸುಡುವಾಗ ವಾಯು ಬೀಸಲು ಉರಿಯು ಘನ ಪ್ರಜ್ವಲಿಸುತಿಹುದು ಗಗನಕಡರಿ | ಮನೆಯೊಳಿಹ ದೀಪಕ್ಕೆ ಮಾರುತನು ಸೋಂಕಿದರು ಘನಶಕ್ತಿಯುಡುಗಿ ತಾ ನಂದಿಹೋಗುವುದು || ಕರಿಯ ಕಾಯಿದ ಹರಿಯ ಕರುಣತಪ್ಪಿದ ಮೇಲೆ ಮರೆಯ ಹೊಕ್ಕರು ಕಾವ ಮಹಿತರಾರಯ್ಯ | ವರದ ಶ್ರೀ ಪುರಂದರವಿಟ್ಠಲನು ಒಲಿದಿರಲು ಸರುವ ಜನರೆಲ್ಲ ಮೂಜಗದಿ ಹಿತರು ||

Thoughts & Reflections

0

No reflections shared yet. Be the first to share your thoughts!

Share your thought