Bhasaka
← Back to home

ಶರೀರವೆಂತೆಂಬುವ ಹೊಲವ

Author: ಸರ್ಪಭೂಷಣ ಶಿವಯೋಗಿCategory: ಶ್ರೀಗುರುRaaga: ಮಾಲಕೌಂಸ್Taala: ಕವ್ವಾಲೀ
ಶರೀರವೆಂತೆಂಬುವ ಹೊಲವ ಹಸನು ಮಾಡಿ ಪರತತ್ತ್ವಬೆಳೆಯನೆ ಬೆಳೆದುಣ್ಣಿರೋ || ಶಮೆದಮೆಯೆಂದೆಂಬ ಎರಡೆತ್ತುಗಳ ಹೂಡಿ ವಿಮಲಮಾನಸವ ನೇಗಿಲವನೆ ಮಾಡಿ ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು ಸಮತೆಯೆಂದೆಂಬುವ ಗೊಬ್ಬರ ಚೆಲ್ಲಿ || ಗುರುವರನುಪದೇಶವೆಂಬ ಬೀಜವ ಬಿತ್ತಿ ಮೆರೆವ ಸಂಸ್ಕಾರವೃಷ್ಟಿಯ ಬಲದಿ ಅರಿವೆಂಬ ಪೈರನೆ ಬೆಳೆಸುತ ಮುಸುಗಿರ್ದ ದುರಿತದುರ್ಗುಣವೆಂಬ ಕಳೆಯನು ಕಿತ್ತು || ಚಿರಮುಕ್ತಿಯೆಂದೆಂಬ ಧಾನ್ಯವ ಬೆಳೆದುಂಡು ಪರಮಾನಂದದೊಳು ದಣ್ಣನೆ ದಣಿದು ಗುರುಸಿದ್ದನಡಿಗಳಿಗೆರಗುತ್ತ ಭವವೆಂಬ ಬರವನು ತಮ್ಮ ಸೀಮೆಗೆ ಕಳುಹಿ ||

Thoughts & Reflections

0

No reflections shared yet. Be the first to share your thoughts!

Share your thought