Bhasaka
← Back to home

ಶಿವದರುಶನ ನಮಗಾಯ್ತು

Author: ಪುರಂದರದಾಸCategory: ಶ್ರೀಶಿವRaaga: ಜೋನ್‌ಪುರೀTaala: ತ್ರಿತಾಲ
ಶಿವದರುಶನ ನಮಗಾಯ್ತು ಕೇಳೆ ಶಿವರಾತ್ರಿಯ ಜಾಗರಣೆ|| ಪಾತಾಳಗಂಗೆಯ ಸ್ನಾನವ ಮಾಡಲು ಪಾತಕವೆಲ್ಲ ಪರಿಹಾರವು| ಜ್ಯೋತಿರ್ಲಿಂಗನ ಧ್ಯಾನವ ಮಾಡಲು ದ್ಯೂತಗಳಿಲ್ಲ ಅನುದಿನವು|| ಬೇಡಿದ ವರಗಳ ಕೊಡುವನು ತಾಯಿ ಬ್ರಹ್ಮನ ರಾಣಿಯ ನೋಡುವನು| ಆಡುತ ಪಾಡುತ ಏರುತ ಬಸವನ ಆನಂದದಿಂದಲಿ ನಲಿದಾಡುವನು|| ಶಿಖರವ ಕಂಡೆನು ಪುರಂದರ ವಿಟ್ಠಲನ ಹರಿನಾರಾಯಣ ಧ್ಯಾನದಲಿ||

Thoughts & Reflections

0

No reflections shared yet. Be the first to share your thoughts!

Share your thought