← Back to home
ಉತ್ತಿಷ್ಠತ ಜಾಗ್ರತ
Author: ಸ್ವಾಮಿ ಪುರುಷೋತ್ತಮಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ಮಿಶ್ರ ಸಾರಂಗTaala: ತ್ರಿತಾಲ
ॐ
ಉತ್ತಿಷ್ಠತ ಜಾಗ್ರತ | ಮನುಜ ||
ಗುರಿಯನು ಸೇರುವವರೆಗೂ |
ನೀ ಅರೆಕ್ಷಣ ನಿಲ್ಲದೆ ಮುನ್ನಡೆ ಸಖನೇ ||
ನಿನ್ನಯ ಗುರಿಯು ಆತ್ಮದರುಶನ
ನಿನ್ನೊಳಗೆಯೆ ಇದೆ ಆ ರತುನ |
ಬನ್ನಪಡುತ ಈ ಕ್ಷುದ್ರ ಜೀವನದಿ
ಇನ್ನು ತೊಳಲದಿರು ಮುನ್ನಡೆ ಸಖನೇ ||
ಮಮತೆಯ ಈ ದೇಹವೆ ನೀನೆಂದು
ಭ್ರಮಿಸದಿರೈ ನೀ ಎಂದೆಂದೂ |
ಅಮರ ಆತ್ಮನೀ ಅಮೃತಪುತ್ರನೇ
ಅಮಲಾನಂದದಿ ಪರಿಪೂರ್ಣನು ನೀ ||
Thoughts & Reflections
0No reflections shared yet. Be the first to share your thoughts!