Bhasaka
← Back to home

ಶಿವನ ಭಜಿಸಿರೋ

Author: ಅಚ್ಯುತದಾಸCategory: ಶ್ರೀಶಿವ
ಶಿವನ ಭಜಿಸಿರೋ (ಪರ) ಶಿವನ... (ಉಮಾ) ಧವನ ಭಜಿಸಿರೋ || ಶಿವನ ಭವನ ಉಮಾಧವನ ಧವಳಾಂಗನ ದಯಾಘನನ | ಭವದೂರನ ಭಕ್ತಪ್ರಿಯನ ಕವಿಗೇಯನ ಕಾಮಹರನ || ಶಿವನ... ವ್ಯೋಮಕೇಶ ಕಾಮೇಶ್ವರ ಭೂಮಭದ್ರಗಿರಿನಿವಾಸ | ರಾಮನಾಮ ನೇಮದಿಂದ ಭಾಮೆಗೊರೆದ ವಾಮದೇವನ || ಕಾಲರೂಪ ನೀಲಕಂಠ ಮೂಲನಾರಾಯಣನ ಭಕುತ | ವ್ಯಾಲಭೂಷ ಆಶುತೋಷ ಫಾಲನೇತ್ರನ ಭಕುತಿಯಿಂದ ||

Thoughts & Reflections

0

No reflections shared yet. Be the first to share your thoughts!

Share your thought