Bhasaka
← Back to home

ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾಪ್ರದಾಯಕ

Author: ಪುರಂದರದಾಸCategory: ಶ್ರೀಗಣೇಶ
ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾಪ್ರದಾಯಕ || ಪ || ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನ || ಅ.ಪ. || ನಿಟಿಲ ನೇತ್ರನ ದೇವಿಸುತನೆ ನಾಗಭೂಷಣ ಪ್ರೀಯನೇ ಕಟಿತಟಾಂಕಿತ ಕೋಮಲಾಂಗನೆ ಕರ್ಣಕುಂಡಲ ಧಾರನೆ || 1 || ಬಟ್ಟ ಮುತ್ತಿನ ಹಾರಪದಕನೆ ಬಾಹು ಹಸ್ತ ಚತುಷ್ಕನೇ ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶ ಧಾರನೆ || ೨ || ಕುಕ್ಷಿ ಮಹಾಲಂಬೋದರನೆ ಇಕ್ಷು ಚಾಪನ ಗೆಲಿದನೇ ಪಕ್ಷಿವಾಹನ ಶ್ರೀಪುರಂದರ ವಿಠಲನ ನಿಜ ದಾಸನೆ || ೩ ||

Thoughts & Reflections

0

No reflections shared yet. Be the first to share your thoughts!

Share your thought