← Back to home
ಘಟಿಕಾ ಚಲದಿ ನಿಂತಾ ಶ್ರೀ ಹನುಮಂತ
Author: ಪುರಂದರದಾಸCategory: ಶ್ರೀಹನುಮಂತRaaga: ನಾಟTaala: ಅಟ್ಟ
ॐ
ಘಟಿಕಾಚಲದಿ ನಿಂತಾ ಶ್ರೀ ಹನುಮಂತಾ ||ಪ||
ಘಟಿಕಾಚಲದಿ ನಿಂತ ಪಟು ಹನುಮಂತನು
ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ||ಅ.ಪ||
ಚತುರಯುಗದಿ ತಾನು ಅತಿಬಲವಂತನು
ಚತುರ್ಮುಖನಯ್ಯನ
ಚತುರ ಮೂರುತಿಗಳ ಚತುರತನದಿ ಭಜಿಸಿ
ಚತುರ್ಮುಖನಾಗಿ ಚತುರ್ವಿಧ ಫಲಕೊಡುತ ||೧||
ಸರಸಿಜಭವಗೋಸ್ಕರ ಕಲ್ಮಷದೂರ
ವರಚಕ್ರ ತೀರ್ಥಸರ
ಮೆರೆವಾಚಲದಿ ನಿತ್ಯನರಹರಿಗೆದುರಾಗಿ
ಸ್ಥಿರಯೋಗಾಸನದಿ ವರವಕೊಡುವೆನೆಂದು ||೨||
ಶಂಖಚಕ್ರವಧರಿಸಿ ಭಕ್ತರ ಮನದ
ಪಂಕವ ಪರಿಹರಿಸಿ
ಪಂಕಜನಾಭ ಶ್ರೀಪುರಂದರವಿಠಲನ
ಬಿಂಕದ ಸೇವಕ ಸಂಕಟಕಳೆಯುತ ||೩||
Thoughts & Reflections
0No reflections shared yet. Be the first to share your thoughts!