Bhasaka
← Back to home

ನಂಬಿ ಕೆಟ್ಟವರಿಲ್ಲವೊ ರಂಗಯ್ಯನ

Author: ವ್ಯಾಸರಾಯCategory: ಶ್ರೀಕೃಷ್ಣ
ನಂಬಿ ಕೆಟ್ಟವರಿಲ್ಲವೊ ರಂಗಯ್ಯನ ನಂಬದೆ ಕೆಟ್ಟರೆ ಕೆಡಲಿ || ಪ || ಅಂಬುಜನಾಭನ ಅಖಿಲ ಲೋಕೇಶನ ಕಂಬುಕಂಧರ ಕೃಷ್ಣ ಕರುಣಾಸಾಗರನ || ಅ || ತರಳ ಪ್ರಹ್ಲಾದ ಸಾಕ್ಷಿ - ಸರಸಿಯೊಳಿದ್ದ ಕರಿರಾಜನೊಬ್ಬ ಸಾಕ್ಷಿ ಮರಣ ಕಾಲದಿ ಅಜಾಮಿಳ ಮಗನನು ಕರೆಯೆ ಗರುಡನೇರಿ ಬಂದ ಗರುವರಹಿತನ || ೧ || ದೊರೆಯೂರು ಏರಬಂದ ಪುತ್ರನನ್ನು ಕೊರಳ್ಹಿಡಿದ್ಹೊರಡಿಸಲು ಅರಣ್ಯದೊಳಗವನಿದ್ದ ಸ್ಥಳದಲ್ಲಿ ಭರದಿಂದೋಡಿ ಬಂದ ಭಕ್ತವತ್ಸಲನ || ೨ || ತರುಣಿ ದ್ರೌಪದಿ ಸೀರೆಯ ದುಶ್ಯಾಸನ ಸರಸರ ಸೆಳೆಯುತಿರೆ ಕರುಣಿ ತನ್ನೊಡತಿಯೊಡನೆ ಆಡುವುದ ಬಿಟ್ಟು ತ್ವರದಿ ಅಕ್ಷಯವಿಟ್ಟ ಸಿರಿಕೃಷ್ಣರಾಯನ || ೩ ||

Thoughts & Reflections

0

No reflections shared yet. Be the first to share your thoughts!

Share your thought