Bhasaka
← Back to home

ಲಾಲಿ ಲಾಲಿ ನಮ್ಮ ಹರಿಯೆ ಲಾಲಿ

Author: ಪುರಂದರದಾಸCategory: ಶ್ರೀಕೃಷ್ಣ
ಲಾಲಿ ಲಾಲಿ ನಮ್ಮ ಹರಿಯೆ ಲಾಲಿ | ಸುರ ನರರಿಗೆ ಒಲಿದು ಕರುಣವ ಬೀರುವ ದೊರೆಯೆ ಲಾಲಿ || ರಾಮ ಲಾಲಿ ಮೇಘಶ್ಯಾಮ ಲಾಲಿ ರಮಾ ಮನೋಹರ ಅಮಿತ ಸದ್ಗುಣ ಧಾಮ ಲಾಲಿ ||೧|| ಕೃಷ್ಣ ಲಾಲಿ ಸರ್ವೋತ್ಕೃಷ್ಟ ಲಾಲಿ ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆವ ಸಂತುಷ್ಟ ಲಾಲಿ ||೨|| ರಂಗ ಲಾಲಿ ಮಂಗಳಾಂಗ ಲಾಲಿ ಗಂಗೆಯ ಪಡೆದ ತುಂಗ ಮಹಿಮ ನರಸಿಂಗ ಲಾಲಿ ||೩|| ನಂದ ಲಾಲಿ ಗೋಪಿ ಕಂದ ಲಾಲಿ ಮಂದರ ಗಿರಿಧರ ಮಧುಸೂದನ ಮುಕುಂದ ಲಾಲಿ ||೪|| ಶೂರ ಲಾಲಿ ರಣಧೀರ ಲಾಲಿ ಮಾರನಯ್ಯ ನಮ್ಮ ವರ ಪುರಂದರವಿಠಲ ಲಾಲಿ ||೫||

Thoughts & Reflections

0

No reflections shared yet. Be the first to share your thoughts!

Share your thought